ಕನ್ನಡ Serials TRP (ಟಿ.ಅರ.ಪಿ)

Posted on

ಕನ್ನಡ Serials TRP (ಟಿ.ಅರ.ಪಿ)

Kannada Serials

ಕನ್ನಡ Serials TRP (ಟಿ.ಅರ.ಪಿ) – ಸೀರಿಯಲ್ ಅಥವಾ ಧಾರಾವಾಹಿ ಅಂದ್ರೆ ನಮ್ಮ ಮಹಿಳೆಯರಿಗೆ ಎಷ್ಟು ಪ್ರಿಯ ಅನ್ನೋದು ಎಲ್ಲ್ರುಗೂ ಗೊತ್ತು. ಕೇವಲ ಮಹಿಳೆಯರಿಗೆ ಮಾತ್ರ ಅಲ್ಲ, ಮನೆಯಲ್ಲಿ ಇರೋ ಪುರುಷರು ಹಾಗು ಮಕ್ಕಳಿಗೂ ಸಹ ಧಾರಾವಾಹಿಗಳ ಹುಚ್ಚು ಇರುವುದಂತೂ ನಿಜ.

ಬಹುತೇಕ ಎಲ್ಲ ಧಾರಾವಾಹಿಗಳು ಸೋಮವಾರದಿಂದ ಶುಕ್ರವಾರದ ವರೆಗೆ ಪ್ರಸಾರ ಆಗುತ್ತೆ. ಇನ್ನೂ ಕೆಲವು ಶನಿವಾರ ಸಹ ಪ್ರಸಾರವಾಗುತ್ತೆ. ರೆಸ್ಟ್ ಅಂದ್ರೆ ರವಿವಾರ ಮಾತ್ರ. ಆದರೆ, ಸೀರಿಯಲ್ ಹುಚ್ಚು ಇರೋ ನಮ್ಮ ಮಹಿಳೆಯರಿಗೆ ರವಿವಾರ ಯಾಕಪ್ಪಾ ಬರುತ್ತೆ ಸೀರಿಯಲ್ ಇಲ್ಲದೆ ಅನ್ಸತ್ತೆ. ಅದರಲ್ಲೂ, ಶುಕ್ರವಾರ ಇರೋ ಬರೋ ಸಸ್ಪೆನ್ಸ್ ಎಲ್ಲ ತೋರಿಸ್ತಾರೆ, ಆ ಸಸ್ಪೆನ್ಸ ಏನು ಅಂತ ಕುತೂಹಲ ಎಲ್ಲರುಗು. ಯಾವಾಗ ಸೋಮವಾರ ಆಗತ್ತೆ, ಯಾವಾಗ ಸೀರಿಯಲ್ ಶುರು ಆಗತ್ತೆ, ಶುಕ್ರವಾರ ತೋರ್ಸಿರೋ ಸಸ್ಪೆನ್ಸ್ ಏನಿರಬಹುದು ಅನ್ನೋದ್ರಲ್ಲೇ ರವಿವಾರ ಕಳೀತಾರೆ.

ಇಷ್ಟೆಲ್ಲಾ ಅದ್ಮೇಲೂ ಸೋಮವಾರ ಆ ಸಸ್ಪೆನ್ಸ ಏನು ಅಂತ ತೋರಿಸ್ತಾರೆ ಅನ್ನೋ ಗ್ಯಾರಂಟಿ ಇರಲ್ಲ. ಅಥವಾ ಅವರು ತೋರ್ಸಿರೋ ಹಾಗೆ ನಡಿಯುತ್ತೆ ಅಂತಾನೂ ಇರಲ್ಲ. ವಾರ ಪೂರ್ತಿ ಅದೇ ಸಸ್ಪೆನ್ಸ ಎಳೀತಾರೆ, ಇಲ್ಲ ಅದು ಯಾರದ್ದೋ ಕನಸಾಗಿರತ್ತೆ. ಇದೆ ಅಲ್ವಾ ನದಿಯೊಂದು ಈಗಿನ ಸೇರಿಯಲ್ಸ್ ಅಲ್ಲಿ. ಕಥೆಯನ್ನ ಮತ್ತೆ ವೀಕ್ಷಕರನ್ನ ಹೇಗೆ ಹಿಡಿದಿಟ್ಟುಕೊಳ್ಳಬೇಕು ಅನ್ನೋದನ್ನ ಸೇರಿಯಲ್ಸ್ ಡೈರೆಕ್ಟರ್ ಗೆ ಚೆನ್ನಾಗೆ ಗೊತ್ತು.

ಸೀರಿಯಲ್ ಪ್ರೇಮಿಗಳ ಕಥೆ

ಇದು ಕೇವಲ ಕನ್ನಡ ಸೀರಿಯಲ್ಸ್ ಕಥೆ ಅಲ್ಲ, ಎಷ್ಟು ಭಾಷೆಗಳಿವೆಯೋ ಭಾರತದಲ್ಲಿ, ಎಲ್ಲ ಭಾಷೆಯಲ್ಲೂ ಸೀರಿಯಲ್ಸ್ ಇವೆ. ಕೆಲವೊಂದು ಸ್ವಂತ ಕಥೆಗಳು, ಇನ್ನೂ ಕೆಲವೊಂದು ಡಬ್ಬಿಂಗ್ ಮಾಡಿರೋ ಸೀರಿಯಲ್ಸ್, ಇನ್ನೂ ಕೆಲವೊಂದು ರಿಮೇಕ್. ಅದೇನೇ ಇರ್ಲಿ, ಒಟ್ಟಲ್ಲಿ ನಮಗೆ ನೋಡೋಕೆ ಒಂದು ಸೀರಿಯಲ್ ಸಿಕ್ರೆ ಸಾಕು. ಅದನ್ನ ನೋಡ್ತಾ, ಎಂಜಾಯ್ ಮಾಡ್ತಾ, ಅದರಲ್ಲಿರೋ ವಿಲ್ಲನ್ಗಳನ್ನ ಬೈತಾ ಊಟ ಮಾಡೋದೇ ಒಂದು ದೊಡ್ಡ ಟೈಮ್ ಪಾಸ್. ನಿಜ ಹೇಳಿ, ಸೀರಿಯಲ್ ನೋಡದೆ ಇರೋ ಮನೆ ನೋಡಿದಿರಾ ಎಲ್ಲಾದ್ರೂ? ನೀವ್ ನೋಡಲ್ಲ ಅಂದ್ರು ನಿಮ್ಮ ಅಮ್ಮ, ಅಪ್ಪ, ಅಜ್ಜಿ, ಇಲ್ಲ ಅಕ್ಕ/ತಂಗಿ, ಯಾರಾದ್ರೂ ಒಬ್ಬರಿಗೆ ಸೀರಿಯಲ್ ನೋಡದೆ ನಿದ್ದೇನೆ ಬರಲ್ಲ.

ಹಿಂಗೇ ವೀಕ್ಷಕರು ಇರೋವರ್ಗು ಪ್ರತಿ ವರ್ಷ ಹೊಸ ಹೊಸ ಸೀರಿಯಲ್ಸ್ ಬರ್ತಾನೆ ಇರತ್ತೆ. ಅದೇ ರೀತಿ 2025 ರಲ್ಲೂ ಕೂಡ ನಮ್ಮ ಕನ್ನಡದಲ್ಲಿ ಎಷ್ಟೊಂದು ಹೊಸ ಸೀರಿಯಲ್ಸ್ ಪ್ರಸಾರ ಆಗ್ತಿವೆ. ಕೆಲವೊಂದು ಹಳೆ ಕಥೆಗಳ ಮುಂದುವರೆದ ಭಾಗಗಳು. ಇನ್ನೂ ಕೆಲವೊಂದು ಹೊಸ ಕಥೆಗಳು.

ಹಂತಹ ಕನ್ನಡ ಹೊಸ ಸೀರಿಯಲ್ಗಳು ಯಾವ್ಯಾವು? ಸದ್ಯಕ್ಕೆ ನಡೀತಿರೋ ಕನ್ನಡ ಧಾರಾವಾಹಿಗಳು ಯಾವುವು? ಯಾವ ಸೀರಿಯಲ್ ನ ಜನ ಹೆಚ್ಚಾಗಿ ನೋಡ್ತಾರೆ, ಯಾವ ಸೀರಿಯಲ್ ಅತಿ ಫೇಮಸ್ ಆಗಿರೋದು. ಅದನ್ನ ಕೆಳಗಡೆ ನಾವು ಲಿಸ್ಟ್ ಮಾಡಿದೀವಿ ನೋಡಿ. ಅದರಲ್ಲಿ ನನಗೆ ತುಂಬಾ ಇಷ್ಟ ಆಗಿರೋ ಸೀರಿಯಲ್ ಕೂಡ ಇದೆ. ಯಾವುದು ಅಂತೀರಾ? ವೇಟ್ ಮಾಡಿ, ಕೊನೇಲಿ ನಿಮಗೆ ಗೊತ್ತಾಗತ್ತೆ.

ಕನ್ನಡ Serials TRP (ಟಿ.ಅರ.ಪಿ)

ಹೌದು, ಅಷ್ಟಕ್ಕೂ ಯಾವ ಸೀರಿಯಲ್ನಾ ಜನ ತುಂಬಾ ಇಷ್ಟ ಪಡ್ತಾರೆ? ಯಾವ ಸೀರಿಯಲ್ ಹೆಚ್ಚು ಮನೆಗಳಲ್ಲಿ ನೋಡ್ತಾರೆ? ಇದೆಲ್ಲ ಗೊತ್ತಾಗೋದು ಹೇಗೆ? ಇದಕ್ಕೆಲ್ಲ ಉತ್ತರ ಟಿ.ಅರ.ಪಿ (TRP). ಹಾಗಿದ್ದರೆ ಟಿ.ಅರ.ಪಿ ಅಂದರೇನು, ಅದನ್ನ ಹೇಗೆ ತೆಗಿತಾರೆ, ಯಾರು ಇದನ್ನು ನಿರ್ಧಾರ ಮಾಡ್ತಾರಾ, ಯಾವ ಸೀರಿಯಲ್ ಅತಿ ಹೆಚ್ಚು ಟಿ.ಅರ.ಪಿ ಹೊಂದಿದೆ ಅನ್ನೋದನ್ನ ಕೆಲ್ಗಡೆ ನೋಡಣ.

📺 TRP – ಟಿ.ಅರ.ಪಿ ಅಂದ್ರೆ ಏನು?

TRP ಅಂದ್ರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಇದು ಒಂದು ಕಾರ್ಯಕ್ರಮವನ್ನು ಎಷ್ಟು ಜನರು ನೋಡುತಿದ್ದಾರೆ, ಯಾವ ಕಾರ್ಯಕ್ರಮ ಎಷು ಪ್ರಸಿದ್ದಿಯಲ್ಲಿದೆ ಎಂಬದನ್ನು ತೋರಿಸುವ ಒಂದು ಮಾಪನ ಪದ್ಧತಿ ಇದ್ದಹಾಗೆ. ಒಂದು ಟಿವಿ ಕಾರ್ಯಕ್ರಮದ ಜನಪ್ರಿಯತೆ ಗೊತ್ತು ಮಾಡಿಕೊಳ್ಳಲು, ಮತ್ತು ಒಂದು ಕಾರ್ಯಕ್ರಮದ ಬಗ್ಗೆ ಮುಂದಿನ ನಿರ್ಧಾರಗಳನ್ನ ತೆಗೆದುಕೊಳ್ಳಲು ಈ TRP ತುಂಬಾ ಉಪಯುಕ್ತ.

ಜಾಹೀರಾತುದಾರರು, ಪ್ರೊಡ್ಯೂಸರ್ ಗಳು ಮತ್ತು ಚಾನೆಲ್ ಗಳು ತಮ್ಮ ತೀರ್ಮಾನಗಳನ್ನು ತೆಗೆದುಕೊಳ್ಳಲು ಇದೆ ತೃTRP ಉಪಯೋಗಿಸುತ್ತಾರೆ. ಹಾಗಿದ್ರೆ ಈ ಟಿ.ಅರ.ಪಿ ಯಾರ್ ಕೊಡ್ತಾರೆ? TRP ಯನ್ನು ಭಾರತದಲ್ಲಿ BARC (Broadcast Audience Research Council) ಗಣನೆ ಮಾಡುತ್ತದೆ. Bar-o-ಮೀಟರ್ಸ್ ನಾ ಬಳಕೆಯಿಂದ ತೃಪ್ ತಿಳಿದುಕೊಳ್ತಾರೆ.

BARC ಮೊದಲೇ ನಿಗದಿಪಡಿಸಿದ ಸ್ಯಾಂಪಲ್ ಮನೆಗಳಲ್ಲಿ ಟಿವಿಗೆ ಈ ಮೀಟರ್ ಅಂದ್ರೆ ಒಂದು ಸಾಧನವನ್ನು ಅಳವಡಿಸುತ್ತದೆ. ಈ ಸಾಧನ, ಜನರು ಟಿವಿಯಲ್ಲಿ ಯಾವ ಚಾನೆಲ್ ನೋಡುತಿದ್ದಾರೆ, ಎಷ್ಟು ಸಮಯ ನೋಡುತ್ತಾರೆ, ಈ ತಾರಾ ಹಲವು ಮಾಹಿತಿಯನ್ನು ಸಂಗ್ರಹಿಸುತ್ತದೆ. ಲಕ್ಷಾಂತರ ಮನೆಗಳಲ್ಲಿ ಟಿವಿ ಇದೆ. ಆದರೆ TRP ಗಾಗಿ ಕೆಲವು ಮನೆಗಳನ್ನೇ ಆಯ್ಕೆ ಮಾಡಲಾಗುತ್ತದೆ. ಈ ಮನೆಗಳು ನಗರ, ಗ್ರಾಮ, ಬಡ, ಶ್ರೀಮಂತ ಇತ್ಯಾದಿ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುತ್ತವೆ.

TRP ಸಂಗ್ರಹಣೆ ಮತ್ತು ಉಪಯೋಗಗಳು

BARC ಪ್ರತಿದಿನವೂ ಮಾಹಿತಿ ಸಂಗ್ರಹಿಸಿ ವಾರದ TRP ಲಿಸ್ಟ್ ಬಿಡುಗಡೆ ಮಾಡುತ್ತೆ. ಈ ಲಿಸ್ಟ್‌ನಲ್ಲಿ ಯಾವ ಕಾರ್ಯಕ್ರಮ ಹೆಚ್ಚು ವೀಕ್ಷಣೆ ಪಡೆದಿದೆಯೆಂದು ಗೊತ್ತಾಗುತ್ತೆ. ಅಷ್ಟಕ್ಕೂ ಈ ಟಿ.ಅರ.ಪಿ ಇಂದ ಯಾರ್ಯಾರಿಗೆ ಏನೇನು ಉಪಯೋಗ. ಅದರ ಮಾಹಿತಿ ಇಲ್ಲಿದೆ.

ಟಿವಿ ಚಾನೆಲ್: TRP ಜಾಸ್ತಿಯಾದರೆ ಜಾಹೀರಾತುಗಳು ಹೆಚ್ಚು ಬರುವ ಸಾಧ್ಯತೆ. ಮತ್ತು ಜಾಹೀರಾತಿನಿಂದ ಹಣ ಗಳಿಕೆ.

ಜಾಹೀರಾತುದಾರರು: ಎಲ್ಲಿ ಜಾಹೀರಾತು ಹಾಕಬೇಕು ಎಂದು ತೀರ್ಮಾನಿಸಲು TRP ಅವಲಂಬನೆ. ಯಾವ ಕಾರ್ಯಕ್ರಮ ಹೆಚ್ಚು TRP ಹೊಂದಿದೆಯೋ, ಅದರ ಮೇಲೆ ಜಾಹಿರಾತು ಹಾಕುವುದು.

ಪ್ರೊಡ್ಯೂಸರ್ ಗಳು: ಯಾವುದೇ ಒಂದು ಶೋ ಜನಪ್ರಿಯವಾಗಿದೆಯೋ ಅಥವಾ ಫ್ಲಾಪ್ ಆಗಿದೆಯೋ ಎಂಬುದುರ ಬಗ್ಗೆ ಮಾಹಿತಿ.

ಕನ್ನಡ ಟಿವಿ ಸಿರಿಯಲ್ಸ್ TRP

ಸದ್ಯಕ್ಕೆ ಯಾವ ಕನ್ನಡ ಸೀರಿಯಲ್ ಗಳು ಎಷ್ಟು ತೃTRP ಹೊಂದಿವೆ. ಯಾವ ಚಾನೆಲ್ ಗೆ ಹೆಚ್ಚು TRP ಬರ್ತಿದೆ ಎಂಬುದರ ಮಾಹಿತಿ ಇಲ್ಲಿದೆ.

ಸಿರಿಯಲ್ಸ್ TRP List

Serial NameChannelTRP
AmruthadhaareZee Kannada0.498
Shravani SubramanyaZee Kannada0.392
AnnayyaZee Kannada0.368
Puttakkana MakkaluZee Kannada0.277
Lakshmi NivasaZee Kannada0.274
BrahmagantuZee Kannada0.306
Seetha RamaZee Kannada0.158
NinagaagiColors Kannada0.354
BhagyalakshmiColors Kannada0.22
Lakshmi BarammaColors Kannada0.211

ಚಾನೆಲ್ ಗಳ TRP

ChannelAverage TRP
Zee Kannada0.179
Colors Kannada0.115
Star Suvarna0.065
Udaya TV0.07
Suvarna Plus0.023

ಸೀರಿಯಲ್ ಪ್ರಕಾರ ನೋಡಿದ್ರೆ ಅಮೃತಧಾರೆ ಸೀರಿಯಲ್ TRP ಬೇರೆಲ್ಲ ಧಾರಾವಾಹಿಗಳಿಗಿಂತ ಜಾಸ್ತಿ ಇದೆ. ಸದ್ಯಕ್ಕೆ ಅತಿ ಹೆಚ್ಚು ನಡೀತಿರೋ ಸೀರಿಯಲ್ ಇದೆ. ಆದರೆ ಚಾನೆಲ್ ಪ್ರಕಾರ ನೋಡಿದ್ರೆ, ಜಿ.ಕನ್ನಡ ಮುಂಚೂಣಿಯಲ್ಲಿದೆ. ತುಂಬಾ ಸೀರಿಯಲ್ ಗಳ TRP ಚೆನ್ನಾಗಿದೆ. ಮುಂದಿನ ಬರಹಗಳಲ್ಲಿ ಸೇರಿಯಲ್ಸ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡ್ತೀವಿ. ಅಲ್ಲಿವರ್ಗು ಸೀರಿಯಲ್ ನೋಡ್ತಾ ಎಂಜಾಯ್ ಮಾಡ್ತಾ ಇರಿ.

 

Tags:

Leave a Comment